ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ಭಾರತದ ಒಂದು ಪ್ರಮುಖ ಸಂಶೋಧನಾ ಸಂಸ್ಥೆ.ಇದು ಬೆಂಗಳೂರಿನಲ್ಲಿದೆ. ಇದನ್ನು ೧೯೮೮ರಲ್ಲಿ ಖ್ಯಾತ ವಿಜ್ಞಾನಿ ರಾಜಾರಾಮಣ್ಣ ನವರ ನೇತ್ರತ್ವದಲ್ಲಿ ಸ್ಥಾಪಿಸಲಾಯಿತು.ಇಲ್ಲಿ ಹಲವಾರು ಪರಸ್ಪರ ಸಂಬಂಧವುಳ್ಳ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ.